Saturday, 22 August 2015

ಬೆಂಗಳೂರು: ಹೃದಯಾಘಾತದಿಂದ ಮತದಾರರೊಬ್ಬರು ಮೃತಪಟ್ಟ ಘಟನೆ ವೃಷಭಾವತಿನಗರ ವಾರ್ಡ್‍ನಲ್ಲಿ ನಡೆದಿದೆ.
ನಾರಾಯಣಪ್ಪ(75) ಮೃತ ಮತದಾರ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ವ್ಯಾಪ್ತಿಯ ವೃಷಭಾವತಿನಗರ ವಾರ್ಡ್‍ನ 172 ಬೂತ್‍ಗೆ ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ನಾರಾಯಣಪ್ಪ ಮತ ಚಲಾಯಿಸಲು ತೆರಳಿದ್ದರು.
ಮತ ಚಲಾಯಿಸಿದ ಬಳಿಕ ರಸ್ತೆ ದಾಟುವ ವೇಳೆ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮನೆಯ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲೇ ನಾರಾಯಣಪ್ಪ ನಿಧನರಾಗಿದ್ದಾರೆ.

No comments:

Post a Comment