Saturday, 22 August 2015

ಓಟು ಹಾಕಲೇಬೇಕು… ಯಾಕಪ್ಪಾ ಅಂದ್ರೆ…!

ಬಿಬಿಎಂಪಿ ಎಲೆಕ್ಷನ್… ಮನೇಲಿ ಕೂತು ಟಿವಿ ನೋಡ್ಕೊಂಡು, ಸಿನಿಮಾ ಥಿಯೇಟರ್ ನಲ್ಲಿ ಸಿನಿಮಾ ನೋಡ್ಕೊಂಡು, ಫ್ಯಾಮಿಲಿ ಜೊತೆ ಔಟಿಂಗ್ ಹೋಗಿ, ವೆರೈಟಿ ವೆರೈಟಿಯಾಗಿ ಟೈಂ ಪಾಸ್ ಮಾಡೋ ಪ್ಲ್ಯಾನ್ ಇದ್ರೆ ಸೂಪರ್..! ಆದ್ರೆ ಅದಕ್ಕೆ ಮುಂಚೆ ಓಟು ಹಾಕೋದು ಮರೀಬೇಡಿ..! ನೀವು ಓಟು ಹಾಕಲೇಬೇಕು, ಅದೂ ಸರಿಯಾದ ಕ್ಯಾಂಡಿಡೇಟ್ ಗೆ..! ಇಲ್ಲದೇ ಇದ್ರೆ ಬೆಂಗಳೂರಿನ ಮುಗಿಯದ ಗೋಳು ಎಂದಿನಂತೆ ಮುಂದುವರೆಯುತ್ತದೆ..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರಿನ ರಸ್ತೆಗಳು ಸರಿಯಾಗ್ಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ನಿಜವಾಗಿಯೂ ಗಾರ್ಡನ್ ಸಿಟಿ ಆಗ್ಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ಸ್ಲಂ ಮುಕ್ತ ಆಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ಸಾರಿಗೆ ವ್ಯವಸ್ಥೆ ಇನ್ನೂ ಸುಗಮ ಆಗ್ಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ಬೆಂಗಳೂರು ಮಾಲಿನ್ಯ ನಗರಿ ಪಟ್ಟಿಯಿಂದ ಹೊರಗೆ ಬರಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲದಂತಾಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಾವು ನೀವು ಎಂತಹ ಹೊತ್ತಲ್ಲೂ ಧೈರ್ಯವಾಗಿ ಓಡಾಡುವಂತಾಗಬೆಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ಅಪರಾಧಮುಕ್ತ ನಗರವಾಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಿಂತುಹೋಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ಶ್ರೀಮಂತವಾಗಬೇಕು…!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರಿನ ಪ್ರತೀ ಏರಿಯಾಗಳು ಪ್ರಗತಿಯಾಗಬೇಕು..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರಿನ ಬಗ್ಗೆ ನಾವೇ ನೆಗಿಟಿವ್ ಆಗಿ ಮಾತಾಡೋದು ನಿಲ್ಲಬೇಕು,www.tnit.in
ನಾವು ಓಟು ಹಾಕಿದ್ರೆ ಇಷ್ಟೆಲ್ಲಾ ಆಗುತ್ತಾ ಅಂತ ಮೂಗುಮುರೀಬೇಡಿ..! ನಿಮ್ಮ ಆಯ್ಕೆ ಸರಿಯಾಗಿದ್ದರೆ ಇವೆಲ್ಲವೂ ಖಂಡಿತ ಆಗುತ್ತೆ..! ನನ್ನದೊಂದು ಓಟು ಏನ್ ಮಹಾ ಬದಲಾಯಿಸಿಬಿಡುತ್ತೆ ಅಂತ ಲಕ್ಷ ಜನ ಯೋಚಿಸಿದರೆ ಬೆಂಗಳೂರಿನ ಭವಿಷ್ಯ ಕಮರಿ ಹೋಗುತ್ತೆ..! ನೀವಿರೋ ನಿಮ್ಮ ಏರಿಯಾಗೆ ಯಾರು ಗೆದ್ದರೆ ಒಳ್ಳೇದು ಅನ್ಸುತ್ತೋ ಅವರಿಗೆ ಓಟು ಹಾಕಿ..! ಎಲ್ಲರೂ ಭ್ರಷ್ಟರೇ, ಎಲ್ಲರೂ ವೇಸ್ಟ್ ಅಂತ ಅನಿಸಿದ್ರೆ, ಇದ್ದವರಲ್ಲೇ ಉತ್ತಮರನ್ನು ಆರಿಸಿ..! ಆದ್ರೆ ತಪ್ಪದೇ ಓಟು ಮಾಡಿ..! ಓಟು ಹಾಕದೇ ನಾಳೇ ಅದಿಲ್ಲ ಇದಿಲ್ಲ ಅಂತ ದೂರಿದ್ರೆ, ಅದನ್ನು ಕೇಳೋ ನೈತಿಕ ಹಕ್ಕು ನಿಮಗಿರೋದಿಲ್ಲ..! ಹಾಗೇ ಇವತ್ತು ನೋಟು ಇಸ್ಕೊಂಡು ಓಟು ಹಾಕಿದ್ರೆ, ಮುಂದೆ ಪ್ರತಿಯೊಂದಕ್ಕೂ ನೋಟು ಕೊಡಬೇಕು ಅನ್ನೋದನ್ನು ಮರೀಬೇಡಿ..! ಅದೆಷ್ಟೇ ಕಷ್ಟವಾದ್ರೂ ಕುಟುಂಬ ಸಮೇತ ಹೋಗಿ ಓಟು ಹಾಕಿಬನ್ನಿ..! ನಿಮ್ಮ ಮೈಮೇಲೆ ಏಕೈಕ ಒಳ್ಳೆಯ ಕಲೆ ಅಂದ್ರೆ ಅದು ನಿಮ್ಮ ಬೆರಳಮೇಲೆ ಹಾಕಿಸಿಕೊಳ್ಳೋ ಮತದಾನದ ಕಲೆ..!
ನೀವು ಓಟು ಹಾಕಲೇಬೇಕು, ಯಾಕಂದ್ರೆ ನಮ್ಮ ಬೆಂಗಳೂರು ನಮ್ಮ ಹೆಮ್ಮೆಯಾಗಬೇಕು..!

No comments:

Post a Comment